ಕಲಾವಿದರಿಗೆ ಆರ್ಥಿಕ ಭದ್ರತೆ ದೊರಕಿಸಲು ಸರ್ಕಾರಿ ಉದ್ಯೋಗಗಳ ಸೃಷ್ಟಿ ಸಾಧ್ಯವಿಲ್ಲವೇ?

' ಕಲೆ ' ಎಂಬ ಬಹು ಸುಂದರ ಪುಷ್ಪದ ವಿವಿಧ  ಎಸಳುಗಳಂತೆ ಇಂದು ಅನೇಕ ಪ್ರತಿಭಾವಂತ ಕಲಾವಿದರು ನಮ್ಮ ಮುಂದಿದ್ದಾರೆ. ಸದಾ ಸುಗಂಧವನ್ನು ಬೀರುತ್ತಾ, ಕಲಾ ರಸಿಕರಿಗೆ ನೀಡುವ ಮನೋರಂಜನೆ ಹಾಗೂ ಕಲಾ ಸೌಂದರ್ಯದ ಪ್ರಸ್ತುತಿಯಲ್ಲಿ ನಮ್ಮ ಕಲಾವಿದರು ಎಂದೆಂದಿಗೂ ಹಿಂದೆ ಬಿದ್ದಿಲ್ಲ. ಸಂಗೀತಗಾರರೇ ಇರಲಿ, ನೃತ್ಯ- ನಾಟಕ ಕಲಾವಿದರೇ ಇರಲಿ...