Events in Bangalore

by | Oct 1, 2022

ಶರ್ಮಿಳಾ ಮುಖರ್ಜಿ ಅವರ ಹೃದಯಂಗಮ ‘ಪ್ರವಾಹ’ ನೃತ್ಯೋತ್ಸವ

-ವೈ.ಕೆ.ಸಂಧ್ಯಾ ಶರ್ಮ

ಇತ್ತೀಚೆಗೆ ಎ.ಡಿ.ಎ ರಂಗಮಂದಿರದಲ್ಲಿ ಒಡಿಸ್ಸಿ ನೃತ್ಯ ಕಲಾವಿದೆ ಶರ್ಮಿಳಾ ಮುಖರ್ಜಿ -ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯ ಕಲಾವಿದೆ- ಖ್ಯಾತ ನೃತ್ಯಾಚಾರ್ಯ ಕೇಳುಚರಣ್ ಅವರ ಶಿಷ್ಯೆಯು  ತಮ್ಮ ‘ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್’ – ನೃತ್ಯತಂಡ’ದೊಡನೆ ಅರ್ಪಿಸಿದ ‘ಪ್ರವಾಹ’ ನೃತ್ಯೋತ್ಸವ ನಯನ ಮನೋಹರವಷ್ಟೇ ಅಲ್ಲ, ಅತ್ಯಂತ ಹೃದಯಸ್ಪರ್ಶೀಯಾಗಿತ್ತು ಕೂಡ.  ‘ಸಂಜಲಿ ಎನ್ಸೆಮ್ಬಲ್’ ನೃತ್ಯ ಕಲಾವಿದರಾದ  ಸುರಂಜನ ಎನ್ಡೌ,  ಶ್ರೀಜಿತ ಸನ್ಯಾಲ್ , ಶ್ವೇತಾ ಶ್ರೀಧರನ್, ಅನುಶ್ರೀ ಪದ್ಮನಾಭ, ನಂದಿತಾ ಭಟ್ಟಾಚಾರ್ಯ, ಅನುರಾಧಾ ಘೋಷ್ ಮತ್ತು ಅಪರ್ಣ ಮಹಾಪಾತ್ರ ಅವರಿಂದ ಸೂರ್ಯವಂದನಾ’ ಮತ್ತು ‘’ವಸಂತಗೀತಂ’’ ಸಮೂಹ ನೃತ್ಯ ಪ್ರದರ್ಶನ, ‘ಮೇನಕಾ’- ಶರ್ಮಿಳಾ ಅವರಿಂದ ಏಕವ್ಯಕ್ತಿ ನೃತ್ಯರೂಪಕ  ಮತ್ತು ಭರತನಾಟ್ಯ ನೃತ್ಯಪಟು-ಗುರು ಪಾರ್ಶ್ವನಾಥ ಎಸ್. ಉಪಾಧ್ಯೆ, ಶ್ರುತಿ ಗೋಪಾಲ್ ಮತ್ತು ಪಿ.ವಿ.ಆದಿತ್ಯ ತಂಡವು ’ಪಾರ್ಥ’ ನೃತ್ಯರೂಪಕವನ್ನು ಪ್ರಸ್ತುತಪಡಿಸಿತು.

ಸೂರ್ಯ ವಂದನ – ವೇದಿಕೆಯ ಮೇಲೆ ಒಂದು ಅಪೂರ್ವ ಗಂಧರ್ವ ಲೋಕವೇ ಸೃಷ್ಟಿಯಾಗಿತ್ತು. ಇಕ್ಕೆಲಗಳಿಂದ ಸುರುಳಿ ಸುರುಳಿಯಾಗಿ ನುಸುಳಿ ಬರುತ್ತಿದ್ದ ತೆಳುವಾದ ಹೊಗೆ ಮಂಜಿನಂತೆ ಆವರಿಸಿತ್ತು. ನಡುವೆ ದೇವಲೋಕದ ಅಪ್ಸರೆಯರಂಥ ಲಲನೆಯರು, ಸೂರ್ಯನ ಕಿತ್ತಿಳೆಯ ರಂಗಿನ ಕಿರಣಗಳಲ್ಲಿ ಅಪೂರ್ವವಾಗಿ ಶೋಭಿಸಿದರು.  ಸಪ್ತಾಶ್ವಗಳನ್ನೇರಿ ಬಂದ ಆದಿತ್ಯನ ರಥವಾಗಿ ಒಡಿಸ್ಸಿಯ ನಾಜೂಕು ಚಲನೆಗಳಲ್ಲಿ ನರ್ತಕಿಯರು ಕುದುರೆಯಾಗಿ ಕಿರುಹೆಜ್ಜೆಗಳಲ್ಲಿ ಕಿಂಕಿಣಿಸಿದರು. ಶ್ವೇತವಸ್ತ್ರ ತೊಟ್ಟ ಅವರ ಕೈಗಳು ನೆರಳು ಬೆಳಕಿನಾಟದಲ್ಲಿ ಕಿರಣಗಳಂತೆ ಗಾಳಿಯಲ್ಲಿ ಚಕ್ರಾಕಾರವಾಗಿ ತಿರುಗಿ ಸೂರ್ಯಮಂಡಲವನ್ನು ರಚಿಸಿದವು. ಮುದ ನೀಡುವ ಸುಂದರ ಚಲನೆಗಳು-ವಿನೂತನ ಭಂಗಿಗಳು ಕಣ್ಮಿಟುಕಿಸದೆ ನೋಡುವ ಹಾಗೇ ಮಾಡಿದವು. ನವಿರಾಗಿ ಸೊಂಟ ಚಲಿಸಿ, ಆರೋಹಣ ಮತ್ತು ವಿವಿಧ ಹೊಸ ವಿನ್ಯಾಸಗಳ ತ್ರಿಭಂಗಿಗಳಲ್ಲಿ ನಿಂತು ಸೂರ್ಯದೇವನ ತೇಜಸ್ಸು- ದಿವ್ಯತೆಗಳನ್ನು ಪ್ರತಿಬಿಂಬಿಸಿದರು. ಕಣ್ಮನ ಸೆಳೆದ ಬಣ್ಣಗಳ ಬೆಳಕಿನ ವಿನ್ಯಾಸ ಇನ್ನಷ್ಟು ಆ ಹೃದ್ಯ ದೃಶ್ಯವನ್ನು ವೈಭವೀಕರಿಸಿತು. ‘ಸೂರ್ಯ ವಂದನೆ’ -ಹಿನ್ನಲೆಯ ಸುಶ್ರಾವ್ಯ ಆದಿತ್ಯಹೃದಯದ ಮಂತ್ರೋಚ್ಚಾರ -ಸಂಗೀತಗಳಿಂದ ಮಹಾ ಪಾಪಹರ ಕಶ್ಯಪಪುತ್ರ ಸೂರ್ಯದೇವನ ಮಹಿಮೆ-ವೈಶಿಷ್ಟ್ಯಗಳನ್ನು ಅನನ್ಯವಾಗಿ ಸಾಕಾರಗೊಳಿಸಿತು.

ವಸಂತಗೀತಂ – ಕಾಳಿದಾಸ ಮಹಾಕವಿಯ ‘ಋತುಸಂಹಾರ’ –ಆಧರಿಸಿ ಪ್ರಸ್ತುತಪಡಿಸಿದ ಪ್ರಕೃತಿಯ ರಮ್ಯ ಚಿತ್ರಣಗಳ ಸೊಗಡು ಮುದನೀಡಿತು. ಶರ್ಮಿಳಾ ಮುಖರ್ಜಿ  ಅವರ ಹೊಸ ನೃತ್ಯ ಸಂಯೋಜನೆಗಳ ಮೆರುಗು – ಪಂಡಿತ್ ನಿತ್ಯಾನಂದ ಮಿಶ್ರ ಅವರ ಸಾಹಿತ್ಯದಲ್ಲಿ ಒಡಮೂಡಿತ್ತು. ವಸಂತ ಮಾಸದ ಪ್ರಾಕೃತಿಕ ಸೌಂದರ್ಯ, ಪ್ರೇಮಿಗಳ ವಿರಹದ ನೋವನ್ನು ಉದ್ದೀಪಿಸುವ ಭೃಂಗಗಳ ಮತ್ತು ಪುಷ್ಪಗಳ ಸಮಾಗಮ, ಸುವಾಸನಾಭರಿತ ಹೂಗೊಂಚಲುಗಳು, ಸಂಜೆಯ ಮೆಲು ತಂಗಾಳಿ, ಕಿವಿದುಂಬುವ ಸುಶ್ರಾವ್ಯ ಕುಕಿಲಸ್ವನ, ಮಾವಿನ ಚಿಗುರು, ಪಲ್ಲವಿಸಿದ ಹೂಗಳು, ನಳನಳಿಸುವ ಕಮಲಗಳು, ಯೌವ್ವನವತಿಯರ ಸಂಭ್ರಮ-ಉಲ್ಲಾಸ, ಅವರ ಅಲೆಗೂದಲ ಹೆರಳುಗಳಲ್ಲಿ ನಲಿವ ಮಲ್ಲಿಕಾ ಮಾಲೆಗಳು-ಒಂದೇ ಎರಡೇ ಪ್ರಣಯದ ಕಚಗುಳಿಯಿಡುವ ಕಾಮರೂಪಿ ಮನ್ಮಥನ ಲೀಲೋಲ್ಲಾಸಗಳ ಶೃಂಗಾರದ ಭಾವಪ್ರವಾಹವನ್ನು ಯುವ ನರ್ತಕಿಯರು ತಾವೇ ಗಿಡ-ಮರ-ಬಳ್ಳಿ, ಭೃಂಗಗಳಾಗಿ ಕಾಳಿದಾಸನ ರಸಭರಿತ ಬಣ್ಣನೆಯನ್ನು ತಮ್ಮ ಸುಮನೋಹರ ಆಂಗಿಕಾಭಿನಯಗಳಿಂದ ಕಣ್ಮುಂದೆ ಕಟ್ಟಿಕೊಟ್ಟರು. ವೇದಿಕೆಯ ತುಂಬಾ ಮಿಂಚಿನಬಳ್ಳಿಗಳಂತೆ ಹರಿದಾಡಿ ವಿಸ್ಮಯವನ್ನುಂಟು ಮಾಡಿದರು.
ಮೇನಕೆ-ಯಾಗಿ ಶರ್ಮಿಳಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ಕದಲಿಸಿದರು. ಮಂಜಿನಲೆಯ ಮಧ್ಯೆ ಮೋಡದ ಮೇಲೆ ತೇಲಿಬಂದಂತೆ ಹಗುರಾಗಿ ಭೂಮಿಯ ಮೇಲೆ  ಅವತರಿಸಿದ ಮೇನಕೆ, ತನ್ನ ಅಂದ-ಚೆಂದವನ್ನು, ಮಿನುಗು ಮಂದಹಾಸವನ್ನುಬೀರುತ್ತ  ಋಷಿ ವಿಶ್ವಾಮಿತ್ರನ ತಪೋಭಂಗ ಮಾಡಲು ಇಂದ್ರನಿಂದ ಆದೇಶಿತಳಾಗಿ ನೇರ ಋಷಿಯಿದ್ದ  ಪ್ರದೇಶವನ್ನು ಪ್ರವೇಶಿಸುವಳು. ಅವನ ಕಠಿಣ ತಪಸ್ಸು-ತೇಜಸ್ಸು ಅವಳನ್ನು ಸೆಳೆಯುತ್ತದೆ. ಅವನ ಮುಂದೆ ಮನ್ಮಥ ಸ್ವರೂಪಿಯಾಗಿ ಬಾಗಿ ಬಳುಕುತ್ತ ಮೇನಕೆ ಅವನ ಹೃದಯಕ್ಕೆ ಕಿಚ್ಚಿಡುವಳು. ಚೆಲುವಿನ ಬನಿ ಇಮ್ಮಡಿಯಾಗುವಂತೆ ಶರ್ಮಿಳಾ ತಮ್ಮ ಗಾಜಿನ ಗೊಂಬೆಯಂಥ ಸಪೂರಾದ ದೇಹವನ್ನು ಬಳುಕಿಸುತ್ತ ಒನಪು ವಯ್ಯಾರಗಳಿಂದ ಋಷಿಯ ಮನಸ್ಸನ್ನು ಆಕರ್ಷಿಸುವ ಪ್ರಯತ್ನದಲ್ಲಿ ತಾನೇ ಅವನಿಗೊಲಿದು, ಗಾಂಧರ್ವ ವಿವಾಹವಾಗಿ ನದಿಯ ತಟದಲ್ಲಿ ಹೆಣ್ಣುಮಗುವನ್ನು ಹಡೆಯುವಳು. ಅಷ್ಟರಲ್ಲಿ, ಅವಳು ಬಂದ ಕಾರ್ಯ ಮುಗಿದಿದ್ದು,  ಇಂದ್ರನೊತ್ತಾಯಕ್ಕೆ ಮಣಿದು ದುಃಖಿಸುತ್ತ  ಅವಳು ಮಗುವನ್ನು ಪ್ರಕೃತಿಯ ಮಡಿಲಿಗೊಪ್ಪಿಸಿ ಹಿಂತಿರುಗುವ ಸನ್ನಿವೇಶದಲ್ಲಿ ಕಲಾವಿದೆ ಶರ್ಮಿಳಾ ಅವರ ಕಣ್ಣೀರು, ನೋಡುವವರ ಕಣ್ಣಲ್ಲೂ ಒಸರುವಂತೆ ಮಾಡುವಷ್ಟು ಪರಿಣಾಮಕಾರಿ ಅಭಿನಯ ಅವರದಾಗಿತ್ತು. ಮೇನಕೆಯ ಮಾನಸಿಕ ತೊಳಲಾಟ- ವಿಪ್ಲವ, ಶರ್ಮಿಳಾರ ‘ಪಾತ್ರ ಪರಕಾಯ ಪ್ರವೇಶ’ ಸಾಮರ್ಥ್ಯ ಎಂಥವರನ್ನೂ ಸೆಳೆಯದಿರದು. ಸಾಮಾನ್ಯ ಮನುಷ್ಯಳಂತೆ ಮೇನಕೆ ಹಸುಗಂದನನ್ನು ಅಗಲುವ ಸನ್ನಿವೇಶವನ್ನು ಕಲಾವಿದೆ ತುಮುಲಗಳಿಂದ ಸಂಕಟಪಡುವ ಚಿತ್ರಣವನ್ನು ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ತಮ್ಮ ಪ್ರಬುದ್ಧ ಅಭಿನಯದಿಂದ ಸಾಕ್ಷಾತ್ಕರಿಸಿದರು.

ಪಾರ್ಥ– ಸ್ವರ್ಗಾರೋಹಣ ಪರ್ವದಲ್ಲಿ ಅರ್ಜುನ ಸ್ವರ್ಗಾಭಿಮುಖವಾಗಿ ಸಾಗುತ್ತಿರುವಾಗ, ಅವನ ತಮ್ಮಂದಿರು ಒಬ್ಬೊಬ್ಬರೇ ಕುಸಿದು ಸಾಯುತ್ತ ಹೋಗುವ ದೃಶ್ಯ ಕಂಡು ಅವನು ಭಾವುಕತೆಯಿಂದ ಹತಾಶನಾಗುತ್ತಾನೆ. ಮುಂದಡಿಯಿಡಲು ಆಶಕ್ತನಾಗಿ, ಪರ್ವತವೇರಲು ನಿರ್ವೀಯನಾಗ ತೊಡಗಿದಾಗ ಅವನೊಳಗೆ ವಿಚಾರ ಮಂಥನ ಪ್ರಾರಂಭವಾಗುತ್ತದೆ. ತನ್ನ ಶಕ್ತಿ-ಸಾಮರ್ಥ್ಯ, ಪದವಿ, ಖ್ಯಾತಿಗಳ ಅಹಂ ಅವನ ಕಣ್ಮುಂದೆ ಸಂಚರಿಸುತ್ತವೆ. ಜಗದ್ವಿಖ್ಯಾತ ಧನುರ್ವಿದ್ಯಾ ಪ್ರಾವೀಣ್ಯನಾದ ನಾನು ಇಷ್ಟು ಶಕ್ತಿಹೀನನಾದೆನೇ ಎಂದು ಯೋಚಿಸುತ್ತ ತನ್ನ ಗತಜೀವನದ ಹಲವು ಘಟನೆಗಳನ್ನು ಮೆಲುಕು ಹಾಕುತ್ತಾ ಹೋಗುತ್ತಾನೆ. ಇಲ್ಲಿ ವೇದಿಕೆಯ ಮೇಲೆ ಎರಡು ನೆಲೆಗಳಲ್ಲಿ ಪಾತ್ರಗಳ ಸಂಚಾರ-ಅಭಿನಯ ಮತ್ತು ನರ್ತನ ನಡೆಯುತ್ತಾ ಹೋಗುತ್ತದೆ. ಒಟ್ಟು ಮೂರು ಪಾತ್ರಗಳು ವಿಶಿಷ್ಟ ಸನ್ನಿವೇಶ-ಚಿತ್ರಣಗಳನ್ನು ಅನುಪಮವಾಗಿ ಕಟ್ಟಿಕೊಡುತ್ತವೆ. ಸ್ವರ್ಗಾಭಿಮುಖ ಹೊರಟ ಈ ಅರ್ಜುನನ ಪಾತ್ರಕ್ಕೆ ಪರ್ಯಾಯವಾಗಿ ಇನ್ನೊಬ್ಬ ಪಾತ್ರಧಾರಿ (ಆದಿತ್ಯ) ಅರ್ಜುನನಾಗಿ, ಜೊತೆಗೆ ಇನ್ನೊಬ್ಬಳು ಪಾತ್ರಧಾರಿ (ಶ್ರುತಿ ಗೋಪಾಲ್) ಆಯಾ ಸನ್ನಿವೇಶಗಳಿಗೆ ತಕ್ಕಂತೆ ವಿವಿಧ ಪಾತ್ರಗಳನ್ನು ಬಹು ಸೊಗಸಾಗಿ ತಮ್ಮ ನೃತ್ತಗಳ ಖಾಚಿತ್ಯ-ಹರಿತ ಅಭಿನಯಗಳಿಂದ ನಿರ್ವಹಿಸಿದರು. ಅರ್ಜುನನ ಮತ್ಸರದಿಂದ ವಂಚನೆಗೊಳಗಾದ ಪರಮ ಸಾಹಸಿ ಏಕಲವ್ಯನ ದಾರುಣ ಘಟನೆ, ಗಂಡಂದಿರ ಷಂಡತನದಿಂದ ನಿರಪರಾಧಿ ದ್ರೌಪದಿಯ ವಸ್ತ್ರಾಪಹರಣ ನಡೆದದ್ದು, ಶಿಖಂಡಿಯನ್ನು ಮುಂದಿಟ್ಟುಕೊಂಡು ಅರ್ಜುನ ವಿದ್ಯೆ ಕಲಿಸಿದ ಗುರು ದ್ರೋಣರನ್ನೇ ಹತ್ಯೆ ಮಾಡಿದ ಗುರುದ್ರೋಹದ ವಿವಿಧ ದೃಶ್ಯಗಳು ಅವನ್ಕಣ್ಮುಂದೆ ಬಂದು ಮನಕಲಕಿ ಪಶ್ಚಾತ್ತಾಪದಿಂದ ದಗ್ಧನಾಗಿ ಹೋಗುತ್ತಾನೆ. ಅರ್ಜುನ ತನ್ನ ಮನಸ್ಸಿನಲ್ಲಿ ಕಿಚ್ಚಿಟ್ಟ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಮೇಲಿನಿಂದ ಹಿಂತಿರುಗಿ ನೋಡುತ್ತಿದ್ದಂತೆ, ಕೆಳಗೆ ನೆನಪಿನ ರಂಗದಲ್ಲಿ ಈ ಎಲ್ಲ ಘಟನೆಗಳೂ ಪುನರ್ನಿರ್ಮಾಣವಾಗುತ್ತವೆ.
ಉಳಿದಿಬ್ಬರು ನರ್ತಕರು ನಾಟಕೀಯ ಆಯಾಮದಲ್ಲಿ ಬಹು ಶಕ್ತವಾಗಿ ಹಿಂದಿನ ಘಟನೆಗಳನ್ನು ಕಟ್ಟಿಕೊಟ್ಟರು. ವಿಶ್ವರೂಪ- ಗೀತೋಪದೇಶದ ಸಂದರ್ಭದಲ್ಲಿ ಮೂಡಿದ ದೃಶ್ಯ ಬೆಳಕಿನ ಚಮತ್ಕಾರ- ಸಂಗೀತದ ಸಾಂಗತ್ಯದೊಡನೆ ರೋಮಾಂಚಕವಾಗಿತ್ತು. ನೂತನಾನುಭಾವವನ್ನು ನೀಡಿದರು. ಮೂರೂ ನರ್ತಕರ ಪ್ರಬುಧ್ಧ ಅಭಿನಯದಲ್ಲಿ, ನರ್ತನದ ಅಸ್ಮಿತೆಯಲ್ಲಿ, ನೂತನ ವಿನ್ಯಾಸದ ನಾಟಕೀಯ ಆಯಾಮದಲ್ಲಿ ಮೂಡಿಬಂದ ಈ ಕಿರು ನೃತ್ಯರೂಪಕದ ಸಂಯೋಜನೆ, ನಿರ್ದೇಶನ-ಅನನ್ಯ ವಿನ್ಯಾಸ ಅನುಪಮವಾಗಿತ್ತು. ಇಂಥ ಶೋಧನಾತ್ಮಕ ಪರಿಕಲ್ಪನೆಗಳು, ಕಲಾತ್ಮಕ ಹೊಸಬಗೆಯ ಪ್ರಸ್ತುತಿಗಳು ಎಂದೂ ಸ್ವಾಗತಾರ್ಹ.

ಪ್ರತಿವರ್ಷ ಇಂಥ ವಿಶೇಷ ಪ್ರಸ್ತುತಿಗಳನ್ನು ಆಯೋಜಿಸುವ, ಹೊಸ ಕಲ್ಪನೆಯ ಅರ್ಪಣೆಗಳನ್ನು ನಿರಂತರ ಪ್ರೋತ್ಸಾಹಿಸುವ  ಶರ್ಮಿಳಾ ಮುಖರ್ಜಿ ಅವರ ಕಾರ್ಯಕ್ಷಮತೆ-ಯೋಜನೆಗಳು ನಿಜಕ್ಕೂ ಅಭಿನಂದನೀಯ.

********

Jagath Manyam : Alluri Sitarama Raju

-Shashank Kiron Nair
Photo Credit: Sri. Harshavardhan Karna (HVKpics)

Celebrating Azadi ka Amruth Mahothsav and the 125th birth year of the famed Indian freedom fighter Sri Alluri Sitarama Raju, Sri Rajarajeshwari Kalaniketan presented “Jagath Manyam” a mega dance production portraying his life and historic significance. Post the grand success of the production’s official premier at Chowdiah memorial hall on August 17th it was restaged at the same venue on the 23rd of August.

Rampa Rebellion

National hero Alluri Sitarama Raju with Mahatha Gandhi

Alluri Sitarama Raju was revolutionary, instrumental in uniting the tribal communities and supported them to raise their voice against the British oppression. With his supporters, he built strong and powerful troops of fighters. Sporting traditional weaponry like bow-and-arrow and spears, and employing tactics like using whistles and beating drums to exchange messages amongst themselves, the revolutionaries managed to achieve spectacular successes initially in their struggle against the British. Realising that traditional weaponry would be of not much use against the British, who were all well equipped with modern firearms, he thought the best way forward is to take them away from the enemy. He led the Rampa rebellion in 1922 and lasted until the capture and killing of Raju in May 1924.

 

Sangeet Phanish as Sita

Pavan and Prassanna as British officials

Under the able direction of Dr. Veena Murthy Vijay and assistant choreographer Chethan Urs, the mega dance-drama production salutes the grit and determination of this unsung hero. With about 40 performers involved, this dance drama production portrays excerpts from the life of Alluri Sitarama Raju, played by Sri Mithun Shyam, projecting him as a patriotic national hero. The production also limns his relationship with his lady love – Sita, essayed by Sangeeta Phanish, adding to the layers and emotional quotient of the production. Pavan Kumar and Prasanna Kumar as the British antagonists, with their forceful performances triggered the audiences already brimming with nationalistic emotions. Combined with the powerful visuals and evocative music the scenes depicting the tribulations of the Indians due to atrocities committed toward them , created a deep and long-lasting impact on the spectators. Senior Mohiniattam exponent and actress Sridevi Unni stated that watching the soul-stirring drama she felt as if she was fighting the British herself. “I was in tears watching the suffering our people had to go through” she added.

Indian contemporary dance by Ayana dance company

Folk dancers

The victory of the production lay in the varied flavors infused into it by bringing together folk dance forms of Karnataka, classical dance, Indian contemporary dance and Martial arts to create an extravagant display of Indian culture. Sri Mithun with his impactful performance of the pivotal character, Rama Raju anchored the entire production. The team of Kamsale dancers led by Sri Lingaya brought in the folk essence. Their lively dance and griping antics kept the audience at the edge of their seats. The spirited music by Praveen D Rao too had a folk touch that enriched the experience. Senior art critique Jyothi Raghuram wrote in her review of the production featured on the  Narthaki online blog: “It is not feasible to get into the nitty gritty of such huge productions while assessing them. By definition, they defy categorization and classicism, as numerous elements are brought into their making. What essentially matters is efficacy of communication and overall aesthetics. Here, Veena scored in carrying forth a story of valour and sacrifice, an apt tribute to mark India’s 75th year of independence.” Close at hand was the Ayana dance company with their electrifying Indian contemporary dance interludes kindling a sense of celebration. Multimedia and lighting, by Surya Rao, created the perfect ambiance for each scene beguiling the onlookers into the realm of the narrative. Eminent Veena Artist Dr. Suma Sudhindra remarked that the production was in many ways paralleled to Broadway theatre. Jagath Manyam – Alluri Sitarama Raju was a grand success earning itself multiple stagings across Karnataka.

***********

Recent Posts